Friday 1 August 2014

ಮಿನಿ ಮಿನಿ ಮಿನುಗುವ ಕವನ


ಸ್ವರಚಿತ ಕವನ

ಹೊಸ ಹುಡುಗ
ನಮ್ಮ ತರಗತಿಗೆ ಬಂದ ಹೊಸ ಹುಡುಗ ಆಶಿಕ
ಯಾವಾಗಲೂ  ನಗುತ್ತಾನೆ ನಮ್ಮೊಂದಿಗೆ ಪಕಪಕ !
ಅವನೆಂದರೆ ನಮಗೆಲ್ಲ ಬಹಳ ಬಹಳ ಇಷ್ಟ
ಕನ್ನಡ ಬರೆಯಲು ಹೇಳಿದರೆ ಅವನಿಗೆ ಕಷ್ಟ!,ಕಷ್ಟ!

ಎರಡು ಜಡೆ
ಎಂದೆಂದಿಗೂ ಇರಲಾರವು ಎರಡು ಜಡೆ ಒಟ್ಟಿಗೆ !
ಜಗಳ ಜಗಳ ಎನ್ನುತ್ತಾರೆ ಎಲ್ಲರೊಂದು ಮಟ್ಟಿಗೆ
ಜಗಳವಾಡುವಾಗ ಕೊಡಬೇಕು ಕೈಗೆ, ಕಟ್ಟಿಗೆ !
ನಂತರದಲಿ ಮುಖ ಮೂತಿ ಆಗೋದು ಸೊಟ್ಟಗೆ!

(ಕ್ಷಮಿಸಿ- ತರಗತಿಯ ವಿದ್ಯಾರ್ಥಿನಿಯರ ಜಗಳ ನೋಡಿದಾಗ ಬರೆದದ್ದು)

ರಚನೆ- ನಿರಂಜನ ಶೆಟ್ಟಿ
10 ಬಿ

Wednesday 30 July 2014

ಸ್ತ್ರೀ-ನಿಸರ್ಗದ ಭವ್ಯ ಸೃಷ್ಟಿ

ಸ್ತ್ರೀ -ನಿಸರ್ಗದ ಭವ್ಯ ಸೃಷ್ಟಿ


ಚುಟುಕು ಕವನಗಳು

ಕೃತಘ್ನತೆ 
ಓ ಪ್ರಕೃತಿ ಮಾತೆ 
ನೀ ಕೊಡುವೆ ಗಾಳಿಯನ್ನು
ನಿ ಕೊಡುವೆ ಜಲವನ್ನು
ಆದರೆ ನಾವು ಕೊಡುವೆವು ನಿನಗೆ ಪ್ಲಾಸ್ಟಿಕ್
ಸುಟ್ಟ ವಾಸನೆಯನ್ನು
- ಸುಬ್ರಹ್ಮಣ್ಯ 10


ಭಾವನೆ
ಸಿಕ್ತಾರೆ ಅನ್ನೋದು ಕಲ್ಪನೆ
       ಸಿಗ್ಬೇಕು ಅನ್ನೋದು ಸ್ವಾರ್ಥ
       ಇಷ್ಟ ಆಗೋದು ಆಕರ್ಷಣೆ
ಸಿಗದಿದ್ರು ಅವರು ಚೆನ್ನಾಗಿರಲಿ ಅನ್ನೋದು
ಹೃದಯದ ಭಾವನೆ
                                                     ಗಣೇಶ್ 10 ಬಿ